ಗೃಹ ಮಂಡಳಿಯ ಬಗ್ಗೆ

1956 ರಲ್ಲಿ ರಚಿತವಾಗಿದ್ದ ಮೈಸೂರು ಗೃಹ ಮಂಡಳಿ ತದನಂತರ ಕರ್ನಾಟಕ ಗೃಹ ಮಂಡಳಿ ಅಧಿನಿಯಮ 1962 ರ ಮೇರೆಗೆ ಕರ್ನಾಟಕ ಗೃಹ ಮಂಡಳಿಯಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕ ಗೃಹ ಮಂಡಳಿಯ ಮೂಲ ಉದ್ದೇಶ "ವಸತಿ ಸ್ಥಳಾವಕಾಶದ ಬಗೆಗೆ ವ್ಯವರಿಸುವ ಮತ್ತು ಅದರ ಅಗತ್ಯತೆಯನ್ನು ಪೂರೈಸುವ ಉದ್ದೇಶಕ್ಕಾಗಿ ಅವಶ್ಯವಿರುವಂತಹ ಯೋಜನೆಗಳನ್ನು ರೂಪಿಸುವುದು ಮತ್ತು ಅಂತಹ ಕಾಮಗಾರಿಗಳನ್ನು ನಿರ್ವಹಿಸುವುದು" ಹಾಗು ಹಂಚಿಕೆ ಮಾಡುವುದು ಈ ಉದ್ದೇಶದೊಂದಿಗೆ ಕರ್ನಾಟಕ ಗೃಹ ಮಂಡಳಿಯು ಜನರಿಗೆ ಮನೆ/ನಿವೇಶನ ಒದಗಿಸಲು ಪ್ರಯತ್ನಿಸುತ್ತಿದೆ.ಇದರಿಂದಾಗಿ ಇದು ಕರ್ನಾಟಕದಾದ್ಯಂತ ಗೃಹ ನಿರ್ಮಾಣದ ಅತ್ಯಂತ ಪ್ರಮುಖ ಸ್ವಾಯುತ್ತತೆಯ ಸಂಸ್ಥೆಯಾಗಿದೆ.

ಕರ್ನಾಟಕ ಗೃಹ ಮಂಡಳಿಯ ಮಹತ್ವಾಕಾಂಕ್ಷೆ ಮತ್ತು ಗುರಿ

ನಮ್ಮ ಮಹತ್ವಾಕಾಂಕ್ಷೆ

ಪರಿಸರದೊಡನೆ ಸಾಮರಸ್ಯ ಹೊಂದಿರುವ ಅತ್ಯಾಧುನಿಕ ಮೂಲ ಸೌಲಭ್ಯ ಗಳ ಸಹಿತ, ಸ್ವಯಂಪರಿಪೂರ್ಣ ಸಮುದಾಯಗಳನ್ನು ಸ್ಥಾಪಿಸುವ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುವುದು.

ನಮ್ಮ ಗುರಿ

ದೃಡವಾದ,ನ್ಯಾಯ ಸಮ್ಮತವಾದ,ಪರಿಸರ ಸ್ನೇಹಿ,ಒಪ್ಪಬಹುದಾದ,ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು.

ಗುಣಮಟ್ಟ ಕಾಪಾಡಿಕೊಂಡು, ನಿರಂತರವಾಗಿ ನ್ಯಾಯಯುತವಾಗಿ ವಿತರಣೆ ಮಾಡುವುದು

ಗ್ರಾಹಕರನ್ನು ತೃಪ್ತಿ ಪಡಿಸುವುದಕ್ಕೆ ನಿರಂತರವಾಗಿ ಶ್ರಮಿಸುವುದು

ಸುಸಜ್ಜಿತ ಬಡಾವಣೆ ಹಾಗೂ ಅದರ ಮೂಲ ಸೌಕರ್ಯ,ಸೇವೆಗಳನ್ನುಒದಗಿಸುವುದು

ಪಾರದರ್ಶಕವಾದ ರೀತಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಸಮಾಲೋಚಕನಾಗಿ ಮತ್ತು ಸಹಭಾಗಿಯಾಗಿ ಕಾರ್ಯ ನಿರ್ವಹಿಸುವುದು