ನಿಯಮಗಳು / ಸೂಚನೆಗಳು

1)  ಅರ್ಜಿದಾರರು ಭಾರತೀಯರಾಗಿದ್ದು,  ಅರ್ಜಿ ಸಲ್ಲಿಸುವ ದಿನಾಂಕಕ್ಕೆ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಅರ್ಜಿದಾರರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ನಗರ/ಪಟ್ಟಣ ವ್ಯಾಪ್ತಿಯಲ್ಲಿ ಮನೆ/ ನಿವೇಶನ ಹೊಂದಿರಬಾರದು.

2)  ಆಸಕ್ತರು ಅರ್ಜಿಗಾಗಿ ಅರ್ಜಿ ಶುಲ್ಕ/ ಪರಿಷ್ಕರಣಾ ಶುಲ್ಕ/ ಆಸಕ್ತ ಮುಂಗಡ ಠೇವಣಿ / ಆರಂಭಿಕ ಠೇವಣಿಯನ್ನು ಡಿಮ್ಯಾಂಡ್ ಡ್ರಾಫ್ಟ್/ ಪೇ ಆರ್ಡ್ ರ್/ಚಲನ್ ಮೂಲಕ " Housing Commissioner, KHB Bangalore " ರವರ ಹೆಸರಿನಲ್ಲಿ ಪಡೆದು ಸಲ್ಲಿಸತಕ್ಕದ್ದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನೋಂದಣಿ ಶುಲ್ಕ ಹಾಗೂ ಆರಂಭಿಕ ಠೇವಣಿ ಹೊರುತು ಪಡಿಸಿ ಯಾವುದೇ ಶುಲ್ಕವಿರುವುದಿಲ್ಲ.

3)  ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ಜಿಲ್ಲಾ ಯೋಜನಾ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. ಅಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು  www.karnatakahousing.com

4)   ಡಿ.ಡಿ / ಚಲನ್ ಮೊತ್ತ ಮಂಡಳಿ ಖಾತೆಗೆ ಸಂದಾಯವಾದರೆ ಮಾತ್ರ ಅರ್ಜಿಯನ್ನು ಅಂಗಿಕರಿಸಲಾಗುವುದು.

5)   ಅರ್ಜಿ ನಮೂನೆ, ಪರಿಷ್ಕರಣಾ ಶುಲ್ಕ, ಆಸಕ್ತ ಮುಂಗಡ ಠೇವಣಿ  ಮತ್ತು ಆರಂಭಿಕ ಠೇವಣಿಯನ್ನು ಅಂಗೀಕರಿಸಿದ ಮಾತ್ರಕ್ಕೆ, ಅರ್ಜಿದಾರನಿಗೆ ಮನೆ/ ನಿವೇಶನೆ/ಫ್ಲಾಟ್ ಹಂಚಿಕೆಯ ಹಕ್ಕು ಅಥವಾ ಖಾತ್ರಿ ಎಂದು ಭಾವಿಸತಕ್ಕದ್ದಲ್ಲ.

6)   ಮನೆ / ನಿವೇಶನ / ಫ್ಲಾಟ್ ಗಳಲ್ಲಿ ಶೇ.90 ರಷ್ಟು ಸ್ವತ್ತುಗಳನ್ನು ಲಾಟರಿ ಮುಖಾಂತರ ಮತ್ತು ಶೇ.10 ರಷ್ಟು ಸ್ವತ್ತುಗಳನ್ನು ವಿವೇಚನಾ ಕೋಟಾ ಅಡಿಯಲ್ಲಿ ಷರತ್ತಿಗೊಳಪಟ್ಟು ಮಂಡಳಿಯ ಹಂಚಿಕೆ ನಿಯಮಾವಳಿಗಳು ಮತ್ತು ಠರಾವಿನಂತೆ ಹಂಚಿಕೆ ಮಾಡಲಾಗುವುದು. ಲಾಟರಿ ಮುಖಾಂತರ ಹಂಚಿಕೆಗಾಗಿ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಮಂಡಳಿಯು ನಿಗದಿಪಡಿಸಿದ  ಸಮಯದಲ್ಲಿ ಹಂಚಿಕೆಯಾದ ಸ್ವತ್ತಿಗೆ ಹಣ ಪಾವತಿ ಮಾಡಬೇಕಾಗಿರುವುದು.

7)   ಮಂಡಳಿಯೊಡನೆ ಪತ್ರ ವ್ಯವಹಾರ ಮಾಡುವಾಗ ಅಧಿಸೂಚನೆ, ಜಿಲ್ಲಾಕೋಡ್ ಸಂಖ್ಯೆ, ಯೋಜನೆಯ ಹೆಸರು ಮತ್ತು ಅರ್ಜಿ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು.(ಜಿಲ್ಲಾಕೋಡ್ ಸಂಖ್ಯೆಯ ವಿವರ ಲಗತ್ತಿಸಿದೆ).

8)   ವಿಳಾಸವು ಬದಲಾವಣೆಯಾದಲ್ಲಿ ಮಂಡಳಿಗೆ ಮಾಹಿತಿ ನೀಡತಕ್ಕದ್ದು.ಅರ್ಜಿದಾರನ ಸ್ವಂತ ಹಿತದೃಷ್ಟಿಯಿಂದ ಮುನ್ನೆಚ್ಚರಿಗೆ ಕ್ರಮವಾಗಿ ಭರ್ತಿ ಮಾಡಿದ ಅರ್ಜಿ, ಡಿ.ಡಿ/ಚಲನ್ ಇವುಗಳ ಫೋಟೋ ಪ್ರತಿಯನ್ನು ಇಟ್ಟುಕೊಳ್ಳತಕ್ಕದ್ದು. 

9)   ಕರ್ನಾಟಕ ಗೃಹ ಮಂಡಳಿಯ ಹಂಚಿಕೆ ನಿಯಮವಾಳಿ 1983 (ತಿದ್ದುಪಡಿಗಳನ್ನು ಒಳಗೊಂಡಂತೆ) ಮತ್ತು ಕಾಲಕಾಲಕ್ಕೆ ತೆಗೆದುಕೊಳ್ಳಲಾಗುವ ಮಂಡಳಿಯ ನಿರ್ಣಯಗಳ ಪ್ರಕಾರ ಹಂಚಿಕೆ ಮಾಡಲಾಗುವುದು.ಕರ್ನಾಟಕ ಗೃಹ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

10) ಪರಿಷ್ಕರಣಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರುಪಾವತಿ ಮಾಡುವುದಿಲ್ಲ, ಹಂಚಿಕೆಯಾಗದ ಅರ್ಜಿದಾರರಿಗೆ ಮಂಡಳಿಯ ನಿಯಮ/ನಿಯಮಾವಳಿ/ಠರಾವಿನಂತೆ  ಆರಂಭಿಕ ಠೇವಣಿ ಹಣವನ್ನು ಬಡ್ಡಿ ರಹಿತ ಮರುಪಾವತಿ ಮಾಡಲಾಗುವುದು. ಅರ್ಜಿದಾರರಿಗೆ ಮನೆ/ನಿವೇಶನ/ಫ್ಲಾಟ್ ಹಂಚಿಕೆ ಮಾಡಿದ ನಂತರ, ಅರ್ಜಿದಾರರು ಹಂಚಿಕೆಯನ್ನು ತಿರಸ್ಕರಿಸಿದರೆ ಅಥವಾ ಹಂಚಿಕೆದಾರರು ಮಂಡಳಿಗೆ ಪಾವತಿಸಬೇಕಾದ ಮೊತ್ತವನ್ನು ಪಾವತಿಸದಿದ್ದಲ್ಲಿ/ ಮಂಡಳಿಯು ಹಂಚಿಕೆಯನ್ನು ರದ್ದುಪಡಿಸಿದ್ದಲ್ಲಿ ಮಂಡಳಿಗೆ ಪಾವತಿಸಿದ ಆಸಕ್ತ ಮುಂಗಡ ಠೇವಣಿ / ಆರಂಭಿಕ ಠೇವಣಿಯನ್ನು ಮಂಡಳಿ ನಿಬಂಧನೆಯಂತೆ ಮತ್ತು ಮಂಡಳಿ ಸಭೆಯ ಠರಾವಿನಂತೆ ಮರುಪಾವತಿ ಮಾಡಲಾಗುವುದು.

 

11) ಕೇಂದ್ರ/ರಾಜ್ಯ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಾದಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳಿಂದ ದೃಡೀಕರಣ ಪತ್ರವನ್ನು ಒದಗಿಸುವುದು.

12) ಪರಿಷ್ಕರಣಾ ಶುಲ್ಕ, ಆಸಕ್ತ ಮುಂಗಡ ಠೇವಣಿ ಮತ್ತು ಆರಂಭಿಕ ಠೇವಣಿ ಹಣವನ್ನು ಒಂದೇ ಡಿ.ಡಿ/ಚಲನ್ ಮುಖಾಂತರ ಒಟ್ಟಿಗೆ ಪಾವತಿ ಮಾಡಬಹುದು.

13) ಅಂಚೆ ಮುಖಾಂತರ ಅರ್ಜಿಯನ್ನು ಸಲ್ಲಿಸಿದಲ್ಲಿ, ಅಂಚೆ ಮುಉಖಾಂತರವೇ ಸ್ವೀಕೃತಿಯನ್ನು ಕಳುಹಿಸುವುದು.

14) ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ವೈಬ್ ಸೈಟ್ : ಅಥವಾ www.khbcustomerinfo.com ಅಥವಾ www.karnatakahousing.com ದೂರವಾಣಿ ಸಂಖ್ಯೆ : 22273511-17

                                       <<< Back To Home Page

                                                           

      


                              ಮುಖ ಪುಟ   ಹಣ ಪಾವತಿ ಸಹಾಯ   ಇಲಾಖೆಯ ಬಗ್ಗೆ   ಮಾಹಿತಿ ಹಕ್ಕು   ಪ್ರಕಟಣೆಗಳು   ಗೌಪ್ಯ ನೀತಿ   ವೆಬ್ ಸೈಟ್ ನಕ್ಷೆ